June 25, 2021
>> BACK TO PROJECTS

ಮಕ್ಕಳ ರಕ್ಷಣೆಗಾಗಿ ಮತ್ತೊಂದೆಡೆ ಮಕ್ಕಳ ರಕ್ಷಣಾ ಸಮಿತಿಯ ರಚನೆ……

ದಿನಾಂಕ 23.06.2021 ರಂದು ಹಿರಿಯೂರು ತಾಲೂಕು ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಲಾಯಿತು. ಈ ಸಮಯದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ಸೋಫಿಯಾ ಬಾನು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸೌಮ್ಯ, ವಿಲೇಜ್ ಅಕೌಂಟೆಂಟ್ ಶ್ರೀಮತಿ ಮೇಘನಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುಶೀಲಮ್ಮ, ಉಪಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ, ಚಿತ್ರ ಡಾನ್ ಬೋಸ್ಕೊ ನಿರ್ದೇಶಕರಾದ ಫಾದರ್ ಜೋಸೆಫ್ ರವರು, ಶಿಕ್ಷಕರು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತಿ ಪ್ರೇರಕರು ಹಾಗೂ ಪಂಚಾಯತ್ ಕಾರ್ಯದರ್ಶಿ ಶ್ರೀಯುತ ಶಿವಣ್ಣ, ಸ್ವಸಹಾಯ ಗುಂಪಿನ 40 ಜನ ಸದಸ್ಯರು ಹಾಗೂ ಸಮುದಾಯ ಸಹಭಾಗಿದಾರರು ಉಪಸ್ಥಿತರಿದ್ದರು. ಚಿತ್ರ ಡಾನ್ ಬೋಸ್ಕೊ ಸಂಸ್ಥೆಯ ಕ್ರೀಮ್ ಸಿಬ್ಬಂದಿಯಾದ ಶ್ರೀಯುತ ಮಹಾಂತೇಶ್ ಅವರು ಭಾಗವಹಿಸಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣಾ ಸಮಿತಿಯ ಗುರಿ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ತಿಳಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

COMPLETED PROJECTS UPCOMING PROJECTS